ಕೇಂದ್ರದ ರೈಲ್ವೆ ಮಂತ್ರಿ ಶ್ರೀ ಸುರೇಶ್ ಪ್ರಭು ಅವರು ಶ್ರೀ ಕೃಷ್ಣ ಮಠಕ್ಕೆ ಭೇಟಿನೀಡಿ ಶ್ರೀ ಕೃಷ್ಣ ಮುಖ್ಯಪ್ರಾಣ ದೇವರ ದರ್ಶನಮಾಡಿ
ಪರ್ಯಾಯ ಶ್ರೀ ಕಾಣಿಯೂರು ಶ್ರೀಪಾದರಿಂದ ಪ್ರಸಾದ ಸ್ವೀಕರಿಸಿದರು ಅವರೊಂದಿಗೆ ಶ್ರೀಮತಿ ಶೋಭಾ ಕರಂದ್ಲಾಜೆ ,
ಶ್ರೀ ರಘುಪತಿ ಭಟ್ , ಶ್ರೀ ಲಾಲಾಜಿ ಮೆಂಡನ್ , ಶ್ರೀ ಯೋಗೀಶ್ ಭಟ್ ಉಪಸ್ಥಿತರಿದ್ದರು
ಪರ್ಯಾಯ ಶ್ರೀ ಕಾಣಿಯೂರು ಮಠ ಶ್ರೀ ಕೃಷ್ಣ ಮಠ, ಉಡುಪಿ ಹಾಗೂ ಎಸ್, ಎಮ್ , ಎಸ್, ಪಿ ಸಂಸ್ಕೃತ ಸಂಶೋಧನಕೆಂದ್ರಮ್ , ಉಡುಪಿ ಇದರ ಸಹಯೋಗದಲ್ಲಿ ಶ್ರೀ ಶ್ರೀ ವಿದ್ಯಾಸಮುದ್ರತೀರ್ಥ ಶಾಸ್ತ್ರ ಸಂವರ್ಧೀನೀ ಸಭಾದ 2ನೆ ದಿನದ ಅದಿವೆಶನ .
ಪರ್ಯಾಯ ಶ್ರೀ ಕಾಣಿಯೂರು ಮಠ ಶ್ರೀ ಕೃಷ್ಣ ಮಠದ ಆಶ್ರಯದಲ್ಲಿ ರಾಷ್ಟ್ರೀಯ ಬಾವೈಕ್ಯತೆಯ ಜಾನಪದ ಸಾಂಸ್ಕೃತಿಕ ಸಂಭ್ರಮದ ಉದ್ಘಾಟನಾ ಕಾರ್ಯಕ್ರಮಕ್ಕೆ ರಾಷ್ಟ್ರೀಯ ಜಾನಪದ ತಂಡಗಳ ಪುರಪ್ರವೇಶ ಮೆರವಣಿಗೆ ಉಡುಪಿಯ ಜೋಡುಕಟ್ಟೆಯಿಂದ ಪ್ರಾರಂಭಗೊಂಡು ಶ್ರೀ ಕೃಷ್ಣ ಮಠದ ರಾಜಾಂಗಣ ಪ್ರವೆಶ
ಪರ್ಯಾಯ ಶ್ರೀ ಕಾಣಿಯೂರು ಮಠ ಶ್ರೀ ಕೃಷ್ಣ ಮಠದ ಆಶ್ರಯದಲ್ಲಿ ರಾಷ್ಟ್ರೀಯ ಬಾವೈಕ್ಯತೆಯ ಜಾನಪದ ಸಾಂಸ್ಕೃತಿಕ ಸಂಭ್ರಮದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪರಮಪೂಜ್ಯ ಶ್ರೀ ಕೃಷ್ಣಾಪುರ ಮಠದ ಶ್ರೀ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ಮತ್ತು ಪರ್ಯಾಯ ಶ್ರೀ ಕಾಣಿಯೂರು ಶ್ರೀ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರ ದಿವ್ಯ ಸಾನ್ನಿದ್ಯದಲ್ಲಿ ಉದ್ಘಾಟನೆಯನ್ನು ಕರ್ನಾಟಕ ಸರಕಾರದ ಮಾನ್ಯ ರಾಜ್ಯಪಾಲರಾದ ಸನ್ಮಾನ್ಯ ಶ್ರೀ ವಜುಭಾಯಿ ವಾಲ ನೆರವೇರಿಸಿದರು.
ಉಡುಪಿ-ಚಿಕ್ಕಮಗಳೂರಿನ ಸಂಸದೆ ಶೋಭಾ ಕರಂದ್ಲಾಜೆ, ಉಡುಪಿ ಮಾಜಿ ಶಾಸಕರಾದ ಶ್ರೀ ರಘುಪತಿ ಭಟ್, ದಾವಣಗೆರೆಯ ಭಾರತೀಯ ಸಾಂಸ್ಕೃತಿಕ ಅಕಾಡಮಿಯ ಅಧ್ಯಕ್ಷರಾದ ಡಾ. ರಾಮಪ್ಪ, ಉಡುಪಿ ನಗರಸಭೆಯ ಅಧ್ಯಕ್ಷ ಪಿ. ಯುವರಾಜ್ ಉಪಸ್ಥಿತರಿದ್ದರು
ಕರ್ನಾಟಕದ ಪೂಜಾ ಕುಣಿತ, ಗುಜರಾತಿನ ಸಿದ್ದಿಗೋಮ, ರಾಜಸ್ಥಾನದ ಕಾಲ್ ಬೇಲಿಯ ತಂಡಗಳಿಂದ